ಶಾಂಕವೇಯಗಳು
	ದೀರ್ಘವೃತ್ತಜ (ಎಲ್ಲಿಪ್ಸಾಯ್ಡ್), ಪರವಲಯಜ (ಪ್ಯಾರಬೊಲಾಯ್ಡ್) ಮತ್ತು ಅತಿಪರವಲಯಜಗಳ (ಹೈಪರ್ಬೊಲಾಯ್ಡ್) ಒಟ್ಟು ಹೆಸರು (ಕಾನಿಕಾಯ್ಡ್ಸ್). ಇವು ಮೂರು ಆಯಾಮಗಳ ಘನಾಕೃತಿಗಳು. ಎರಡನೆಯ ದರ್ಜೆಯ ಪೃಷ್ಠ (ಸರ್ಫೇಸ್). ಎಂದೇ ಇದರ ಕಾರ್ಟೀಸಿಯನ್ ಸಮೀಕರಣದ ಸಾರ್ವತ್ರಿಕ ರೂಪ : 
ax2+by2+cz2+2fyz+2gzx+2hxy+2lx+2my+2nz+d=0
ಶಾಂಕವೇಯದ ಕೆಲವು ಮುಖ್ಯ ಗುಣಗಳು : 

	1. ಶಾಂಕವೇಯವನ್ನು ಸರಳರೇಖೆಯೊಂದು ಸ್ಪರ್ಶಿಸದಿರಬಹುದು, ಸ್ಪರ್ಶಿಸಬಹುದು ಅಥವಾ ಎರಡು ವಿಭಿನ್ನ ಬಿಂದುಗಳಲ್ಲಿ ಛೇದಿಸ ಬಹುದು. ಎರಡನೆಯ ಸಂದರ್ಭದಲ್ಲಿ ಆ ಸರಳರೇಖೆಯನ್ನು ಶಾಂಕ ವೇಯದ ಸ್ಪರ್ಶಕ ಎನ್ನುತ್ತೇವೆ. 

	2. ಶಾಂಕವೇಯವನ್ನು  ಸಮತಲವೊಂದು  ಸ್ಪರ್ಶಿಸದಿರಬಹುದು,  ಸ್ಪರ್ಶಿಸಬಹುದು ಅಥವಾ ಛೇದಿಸಬಹುದು. ಈ ಮೂರನೆಯ ಸಂದರ್ಭ ದಲ್ಲಿ ದೊರೆಯುವ ಅಡ್ಡಕೊಯ್ತಕ್ಕೆ ಶಂಕುಚ್ಛೇದ ಅಥವಾ ಶಂಕುಜ (ಕಾನಿಕ್) ಎಂದು ಹೆಸರು. 

	3. ಶಾಂಕವೇಯದ  ಸಾರ್ವತ್ರಿಕ  ರೂಪದಲ್ಲಿ  9  ಸ್ಥಿರಾಂಕಗಳಿವೆ.  ಇದರ ಅರ್ಥ: 

ಸಮರ್ಪಕವಾಗಿ ಆಯ್ದ 9 ನಿರ್ದಿಷ್ಟ ಬಿಂದುಗಳ ಮೂಲಕ ಸಾಗು ವಂತೆ ಅಥವಾ 3 ಪರಸ್ಪರ ವಿಷಮತಲೀಯ ಸರಳರೇಖೆಗಳನ್ನು ಒಳಗೊಳ್ಳು ವಂತೆ ಒಂದು ಶಾಂಕವೇಯವನ್ನು ರಚಿಸಬಹುದು. ಸಮರ್ಪಕ ಲಂಬನಿ ರ್ದೇಶಕ ವ್ಯವಸ್ಥೆಯೊಂದನ್ನು ಆಯ್ದ ಮೇಲಿನ ಸಾರ್ವತ್ರಿಕ ರೂಪವನ್ನು ಸುಲಭ ರೂಪಕ್ಕೆ ಸರಳೀಕರಿಸುವುದು ಸಾಧ್ಯವಿದೆ. ಉದಾ:

	ಇದು ದೀರ್ಘವೃತ್ತಜ

	ಇದು ಒಂದು ಹಾಳೆಯ  ಅತಿಪರವಲಯಜ.

	ಇದು ಎರಡು ಹಾಳೆಗಳ ಅತಿಪರವಲಯಜ

	ಇವೆಲ್ಲವೂ ಕೇಂದ್ರೀಯ ಪೃಷ್ಠಗಳು. ಏಕೆಂದರೆ ಇವುಗಳಿಗೆ ಒಂದೇ ಒಂದು ಕೇಂದ್ರವಿದೆ. ನಕೇಂದ್ರೀಯ ಪೃಷ್ಠಗಳೂ ಇವೆ : 	ಈ ಸಮೀಕರಣ ದೀರ್ಘವೃತ್ತರೂಪದ ಪರವಲಯಜವನ್ನು ಸೂಚಿಸು ತ್ತದೆ. ಇದಕ್ಕೆ ಕೇಂದ್ರವಿಲ್ಲ.	     
(ಬಿ.ಬಿ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ